BANNANJE GOVINDACHARYA – VAIKHARI

ಶ್ರೀ ಬನ್ನಂಜೆ ಗೋವಿಂದಾಚಾರ್ಯ ವೈಖರಿ

  • “ನಾವು ಇನ್ನೊಂದು ಮತವನ್ನು ನೋಡಿದಾಗ ನಮ್ಮ ಮತವೂ ಹೆಚ್ಚು ಅರ್ಥವಾಗುತ್ತದೆ. ಇಲ್ಲದೇ ಇದ್ದರೆ ನಾವು ಕೂಪಮಂಡೂಕಗಳಾಗುತ್ತೇವೆ”
  • “ನಾವು ಪ್ರಮೇಯಗಳನ್ನು ಕೊಟ್ಟು ಹೇಳಬೇಕು, ಇನ್ನೊಬ್ಬರನ್ನು ನಿಂದಿಸಬಾರದು. ನಿಂದಿಸುವುದರಿಂದ ನಿಜ ವಿಷಯ ಅಪಮೌಲ್ಯವಾಗುತ್ತದೆ”
  • “ಬೈಬಲ್ ಅರ್ಥವಾಗಬೇಕಾದರೆ ಉಪನಿಷತ್ತನ್ನು ಓದಬೇಕು”
  • “ದ್ವೇಷ ಬಿತ್ತುವ, ಇನ್ನೊಬ್ಬರ ವಿರುದ್ಧ ಪ್ರಚೋದನೆ ಮಾಡುವ ವಾಕ್ಯ ಯಾವ ಧರ್ಮ ಗ್ರಂಥದಲ್ಲೂ ಇಲ್ಲ, ಇರುವುದಿಲ್ಲ. ಇದ್ದರೆ ಅದು ಧರ್ಮ ಗ್ರಂಥ ಅಲ್ಲ”
  • “ವರ್ಣ ಎಂದರೆ ವ್ಯಕ್ತಿಯ ನಿಜ ಸ್ವಭಾವ ಅದಕ್ಕೂ ಜಾತಿಗೂ ಏನೂ ಸಂಬಂಧ ಇಲ್ಲ”
  • “ಹೊರಗೆ ನಿಂತು ಒಂದು ವಸ್ತುವನ್ನು ನೋಡುವಾಗ ಉಂಟಾಗುವ ಅನುಭೂತಿ ಒಳಗೆ ಕುಳಿತರೆ ಆಗದು.. ನೀರಿನೊಳಗೆ ಕುಳಿತು ನೀರು ಹೇಗಿದೆ ಎಂದಂತೆ ಅದು. ಅದರೊಳಗೆ ಒಂದು ಆವೇಶ ಇರುತ್ತದೆ. ಆವೇಶದಿಂದ ಸತ್ಯ ತಿಳಿಯಲಾಗುವುದಿಲ್ಲ”

ಎಂಭತ್ತರ ಸಂಭ್ರಮಾಚರಣೆಯಲ್ಲಿ ನೀಡಿದ ಕೊನೆಯ ಸಂದೇಶ

” ಪ್ರಾಮಾಣಿಕರಾಗಿ ಬದುಕೋಣ. ಮನಸಿನಲ್ಲಿ ಒಂದು ತೋರಿಕೆಗೆ ಇನ್ನೊಂದು ಎಂಬ ಮುಖವಾಡ ಬೇಡ. ಹೇಳಲಾಗದ ಕಷ್ಟಗಳನ್ನು ಹೇಳಲು ಕಷ್ಟ ಪಡುವುದು ಬೇಡ. ಅಭಿಪ್ರಾಯ ಭೇದ ಇರಲಿ ಆದರೆ ವೈಯಕ್ತಿಕ ದ್ವೇಷ ಬೇಡ”

ಕೆಲವು ವಿಶೇಷ ವಿವರಣೆಗಳು

ಗುರುಕಾರುಣ್ಯ 

ನಾನು ಬೆನ್ನು ನೋವಿನಿಂದ ತಿಂಗಳು ತಿಂಗಳು ಹಾಸಿಗೆ ಹಿಡಿದಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಮನೆಯ ಮುಂದೆ ಗಾಡಿ ನಿಂತಿತು. ಗಾಡಿಯಿಂದ ಅಕ್ಕಿ,ಬೇಳೆಖಾರದಪುಡಿ ಸಹಿತ ಮನೆಗೆ ಬಂತು. ‘..ಯಾರು ಕಳಿಸಿದ್ದು?’ ಎಂದೆ. ‘ಪಲಿಮಾರು ಸ್ವಾಮಿಗಳುಎಂದರು. ಕಣ್ಣಲ್ಲಿ ನೀರು ಬಂತು.”

ನಾನು ಹೇಗೆ ಇವರಿಗೆ ಪ್ರತ್ಯುಪಕಾರ ಸಲ್ಲಿಸಲಿ ?.

ಕೈಗೂಡಿದ ಆಸೆ

ನನಗೆ ಹದಿನಾರು ವರ್ಷ, ಆಗ ನನಗೆ ಬಲವಾದ ನಾಲ್ಕು ಆಸೆಗಳಿದ್ದವು.

ಋಗ್ವೇದದ. 0000 ಮಂತ್ರಗಳಿಗೆ ಅರ್ಥ ಬರೆಯಬೇಕು

ಭಾಗವತಕ್ಕೆ ಒಂದು ವ್ಯಾಖ್ಯಾನ ಬರೆಯಬೇಕು

ಸರ್ವಮೂಲಗ್ರಂಥವನ್ನು ಹೃಷೀಕೇಶತೀರ್ಥರ ಬರೆಹದಂತೆ ಸಂಶೋಧಿಸಬೇಕು

ಸಂಸ್ಕೃತ ಸಿನೆಮಾ ತೆಗೆಯಬೇಕುಇದರಲ್ಲಿ ಕೊನೆಯ ಎರಡು ಆಸೆಗಳನ್ನು ಭಗವಂತ ಕೈಗೂಡಿಸಿದ. ಇನ್ನೆರಡನ್ನು ನಡೆಸಿಕೊಡಬೇಕು.

ಬೇಂದ್ರೆಯ ಸ್ನೇಹ 

ಧಾರವಾಡದ ಒಂದು ಸಭೆಯಲ್ಲಿ ಬೇಂದ್ರೆ ಅಂದಿದ್ದರು – “ನೀವು ಯಾವುದೇ ಕಾರ್ಯಕ್ರಮಕ್ಕೆ ಬನ್ನಂಜೆಯನ್ನುಕರೆದರೂ ಸಾಯಂಕಾಲ ಐದು ಗಂಟೆಯ ಮೇಲೆ ಅವರು ನಿಮಗೆಅದುವರೆಗೆ ಅವರು ನನಗೆ ಬೇಕು“.

ಉದಯವಾಣಿ ಮತ್ತು ನಾನು

ನನಗೆ Academic Qualification ಇಲ್ಲ. ಅಂತಹ ಅರ್ಹತೆ ಇರುವವರು ಹತ್ತಾರು ಮಂದಿ ಕಾಯುತ್ತಿದ್ದರು. ಆದರೂ ಬೇಡವೆಂದರೂ ನನ್ನನ್ನು ಪತ್ರಿಕಾರಂಗಕ್ಕೆ ಒಗ್ಗಿಸಿದವರು ಉದಯವಾಣಿ ಬಳಗ. ನನಗೆ ಇಷ್ಟ ಬಂದಾಗ ಬರುವಂತೆ ಅನುಮತಿಸಿ. ಸಂಕೋಚವಾಗಬಾರದೆಂದು ಹಾಜರಾತಿ ಪುಸ್ತಕದಲ್ಲಿ ನನ್ನ ಹೆಸರನ್ನು ನಮೂದಿಸಿಲ್ಲಬಂದರೆ ಬಂದೆಇಲ್ಲವಾದರೆ ಇಲ್ಲ. ಆದರೆ ಸಂಬಳಕ್ಕೆ ಚ್ಯುತಿಯಿಲ್ಲ. ಬೆನ್ನು ನೋವಿನಿಂದ ತಿಂಗಳುಗಟ್ಟಲೆ ಗೈರುಹಾಜರಾದರೂ ತಿಂಗಳ ಸಂಬಳ ಖಾತೆಗೆ ಜಮಾ! ನಾನು ಹೇಗೆ ಮರೆಯಲಿ ಇವರನ್ನು?

ಹೆಣ್ಣು ಮತ್ತು ವೇದಾಂತ

ಹೆಣ್ಣಿನ ಮೈಯಲ್ಲಿ ವೇದಾಂತದ ಸುಳಿವಿದೆ. ವೇದಾಂತದ ಪುಟಗಳಲ್ಲಿ ಹೆಣ್ಣಿನ ಚಲುವಿದೆ. ಇರಬೇಕಾದ್ದು ಕಾಣುವ ಕಣ್ಣು ಮಾತ್ರ. ಹೆಣ್ಣು ಇಲ್ಲದ ತತ್ವಜ್ಞಾನ ಅಪೂರ್ಣ. ತತ್ವಜ್ಞಾನ  ಒಲ್ಲದ ಹೆಣ್ಣೂ ಅಪೂರ್ಣ. ಇದು ಭರತೇಶ ವೈಭವ.