BANNANJE GOVINDACHARYA PRATISHTANA-STUDY CENTRE

ಬೆಂಗಳೂರಿನ ಆರಣ್ಯಕದಲ್ಲೊಂದು ಬೃಹದಾರಣ್ಯಕ

 • ಬನ್ನಂಜೆ ಅಧ್ಯಯನ ಕೇಂದ್ರ

ಬನ್ನಂಜೆ ಅಧ್ಯಯನ ಕೇಂದ್ರ ನಮ್ಮ ಪ್ರತಿಷ್ಠಾನದ ನಾಲ್ಕು ವರ್ಷಗಳ ಕನಸು. ಬನ್ನಂಜೆ ಅವರು “ಮಾಡುವುದಿದ್ದರೆ ದೂರ ಎಲ್ಲಾದರೂ ಆರಣ್ಯಕದಂಥಲ್ಲಿ ಮಾಡಿ, ಬೆಂಗಳೂರು ನಗರದ ಈ ಗದ್ದಲದಲ್ಲಿ ಬೇಡ” ಎಂದಿದ್ದರು.

ಆರಣ್ಯಕದ ಸುರೇಶ್ ಅವರನ್ನೇ ಈ ಕುರಿತು ಕೇಳಿದೆವು. ಅವರು ತೆರೆದ ಮನಸ್ಸಿನಿಂದ ತುಂಬಿದ ಹೃದಯದಲಿ ಮಡಿಲಾಗಿದ್ದಾರೆ. ಈಗ ಬನ್ನಂಜೆ ಅಧ್ಯಯನ ಕೇಂದ್ರ ಆಕಾರ ಪಡೆಯುವ ಹೊತ್ತು ಬಂದಿದೆ.

ತಾನು ಬದುಕಿದ್ದಾಗ ಹಲವು ಆಶ್ರಮಗಳಲ್ಲಿ ಕಾಲ ಕಳೆದಿದ್ದ ಬನ್ನಂಜೆಯವರು ಕೊನೆಗೆ ಪರಮವಾಗಿ ಪ್ರೀತಿಸಿದ ಸ್ಥಳ ಇದು. ಅವರು ಓಡಾಡಿದ ನೆಲ, ಪಾಠ ಹೇಳಿದ ಲತಾ ಕುಂಜ, ಅಧ್ಯಯನ ಮಾಡಿದ ಕುಟೀರ, ಇಷ್ಟ ಪಟ್ಟ ಅಡುಗೆಮನೆ, ಪ್ರವಚನ ಶಿಬಿರ ನಡೆಸಿದ ಸಭಾಂಗಣ ಎಲ್ಲವೂ ಅಲ್ಲಿ ಈಗ ಬನ್ನಂಜೆ ಅಧ್ಯಯನ ಕೇಂದ್ರ ಆಗಲು ತೆರೆದಿವೆ. ಬನ್ನಂಜೆ ಓದು– ಅವರ ಸಂಸ್ಕೃತ ಗ್ರಂಥಗಳ ಕುರಿತು ಶಿಬಿರ, ಬನ್ನಂಜೆ ಓದು– ಅವರ ಕನ್ನಡ ಕೃತಿಗಳ ಕುರಿತು, ಬನ್ನಂಜೆ ಪ್ರವಚನ– ಒಂದು ವಿಷಯದ ಕುರಿತ ಪ್ರವಚನದ ಜಿಜ್ಞಾಸಾ ಶಿಬಿರ ಹೀಗೆ ಅವರ ಕುರಿತು ವರ್ಷದಲ್ಲಿ ನಾಲ್ಕರಿಂದ ಆರು ಶಿಬಿರ, ಹಾಗೆಯೇ ವೇದ,ಪಠನ/ ಅಧ್ಯಯನ ಆಕಾಂಕ್ಷಿಗಳಿಗೆ ತರಬೇತಿ, ಸಂಸ್ಕೃತ ಭಾಷಾ ಶಿಬಿರ ಇವು ಅಧ್ಯಯನ ಕೇಂದ್ರ ಇಲ್ಲಿ ಮಾಡಲಿರುವ ಕೆಲಸಗಳು. ಇದರ ಜೊತೆಗೆ ಅಧ್ಯಾತ್ಮ ವ್ಯಕ್ತಿಗಳು, ಸಾಧುಸಂತರು, ಅವಧೂತರನ್ನು ಕರೆಯಿಸಿ ಅವರೊಂದಿಗೆ ಸತ್ಸಂಗ ಕಾರ್ಯಕ್ರಮವನ್ನು ನಡೆಸಿ ಕೊಡುವುದು. ಇವು ನಮ್ಮ ಜವಾಬ್ದಾರಿ.

ಕಾಲಾಂತರದಲ್ಲಿ ಅದು ಬೇರೆ ಸ್ವರೂಪ ಅಪೇಕ್ಷಿಸಿದರೆ ಅದಕ್ಕೂ ಸಿದ್ಧವಾಗಿದೆ ಈ ನೆಲ. ಒಂದು ನಿರ್ದಿಷ್ಟ ಸ್ಥಳವನ್ನು ಆಚಾರ್ಯ ಅಧ್ಯಯನ ಕೇಂದ್ರಕ್ಕೆಂದೇ ಮೀಸಲಿಟ್ಟು ಅದರಲ್ಲಿ ಒಂದು ಗ್ರಂಥಾಲಯ, ಸಭಾಂಗಣ ಇವುಗಳನ್ನು ಕಟ್ಟುವುದು. ತತ್ಸಂಬಂಧಿ ಜಮೀನು ಪರಿವರ್ತನೆ ಮತ್ತು ಕಾನೂನು ರೀತ್ಯಾ ದಾಖಲೆ ನಿರ್ಮಾಣ ಇವುಗಳನ್ನು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಕ್ಕೂ ಸುರೇಶ್ ಅವರ ಹೂಮನಸ್ಸು ಸಿದ್ಧವಾಗಿದೆ. ಬೆಳೆಯಿಸಿದರೆ ಅವರೊಡನೆ ಬೆಳೆಯೋಣ ಎಂದು ಬನ್ನಂಜೆ ಅವರನ್ನು ನೆನೆದು ಪ್ರತಿಷ್ಠಾನ ನಡೆಯುತ್ತಿದೆ. ‘ನಾವು ಏನಾದರೂ ಕಟ್ಟುವುದಕ್ಕಿಂತ ನಮ್ಮನ್ನು ಅವರು ಕಟ್ಟಲಿ, ಬೇಡವಾದುದನ್ನು ಕೆಡಹಲಿ‘ ಎಂಬುದು ಆಚಾರ್ಯರಲ್ಲಿ ನಮ್ಮ ಪ್ರಾರ್ಥನೆ.

ಈ ದಿಶೆಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಹುಟ್ಟಿದ ದಿನ ಆಗಸ್ಟ್ ೩. ಇದು ಕೇವಲ ದಿನಾಂಕ. ನಕ್ಷತ್ರಕ್ಕೆ ಅನುಗುಣವಾಗಿ ಆಚರಿಸುವವರ ಭಕ್ತಿಗೆ ಅನುಕೂಲ ಆಗಲಿ, ಪರಸ್ಪರ ಘರ್ಷಣೆ ಬೇಡ ಎಂಬ ಏಕ ಕಾರಣಕ್ಕೆ ನಾವು ದಿನಾಂಕವನ್ನು ನೆನಪಿಸುತ್ತೇವೆ. ಇದು ಅವೈದಿಕ, ಅಥವಾ ಇಂಗ್ಲಿಷ್ ಮೋಹ ಎಂದು ಭಾವಿಸದೇ ಕೇವಲ ಬಾಂಧವ್ಯದ ನಡುವೆ ಸೌಮ್ಯ ಸಹಕಾರ ಎಂದು ತಿಳಿಯಬೇಕು.

ಆ ದಿನಕ್ಕೆ ನಾವು ಅವರಿಗೆ ಅರ್ಪಿಸುವ ಪೂಜ್ಯ ಕಾಣಿಕೆ ಬನ್ನಂಜೆ ಅಧ್ಯಯನ ಕೇಂದ್ರದ ಘೋಷಣೆ. ಅದನ್ನು ಅವರ ಪದತಲಕ್ಕೇ ಅರ್ಪಿಸಿ, ಅದರ ಸಾಧಕ ಬಾಧಕಗಳೆಲ್ಲವೂ ಅವರ ಇಚ್ಚೆ ಎಂದು ಮುಂದಡಿ ಇಟ್ಟಿದ್ದೇವೆ.

 

 • ಈಶಾವಾಸ್ಯ ಗ್ರಂಥಾಲಯ

 

ಬನ್ನಂಜೆ ಅಧ್ಯಯನ ಕೇಂದ್ರ ಬೃಹದಾರಣ್ಯಕ ಆಗಸ್ಟ್ ಮೂರರಂದು ಅಧಿಕೃತವಾಗಿ ಉದ್ಘಾಟನೆ ಆದಾಗ ನಮ್ಮ ಅಧ್ಯಯನ ಕೇಂದ್ರದಲ್ಲಿ ಒಂದು ಗ್ರಂಥಾಲಯ, ಒಂದು ಸಭಾಂಗಣ, ಒಂದು ಓದುವ ಮನೆ ಇರುತ್ತದೆ ಎಂದು ಹೇಳಿದ್ದೆವು.

ಈಗ ಆ ವಾಚನಾಲಯ ಬಾಗಿಲು ತೆಗೆಯಲು ಸಿದ್ಧವಾಗಿದೆ.  ನಾವು ಬೃಹದಾರಣ್ಯಕ ಉದ್ಘಾಟನೆ ಮಾಡಿದ ಎರಡು ದಿನಗಳಲ್ಲಿ ಒಬ್ಬರು ಮಹಾನುಭಾವರು ಆ ಗ್ರಂಥಾಲಯದ ಸಕಲ ಪುಸ್ತಕ ತನ್ನ ಕೊಡುಗೆ ಎಂದರು.

     

ಬನ್ನಂಜೆ ಗೋವಿಂದಾಚಾರ್ಯರ ನೆನಪಿನ ಗ್ರಂಥಾಲಯಕ್ಕೆ ಪುಸ್ತಕಗಳು

 

 1. ಬನ್ನಂಜೆ ಗೋವಿಂದಾಚಾರ್ಯರು ರಚಿಸಿರುವ ಸರ್ವ ಗ್ರಂಥಗಳು
 2. ಭಾಸ, ಕಾಳಿದಾಸ, ಭವಭೂತಿ ಇವರ ಮೂಲ ಸಂಸ್ಕೃತ ಗ್ರಂಥಗಳು
 3. ಬಾಣಭಟ್ಟ ನ ಕಾದಂಬರಿ – ಸಂಸ್ಕೃತ
 4. ಮಧ್ವಸಿದ್ಧಾಂತ ಕ್ಕೆ ಸಂಬಂಧ ಪಟ್ಟ ಎಲ್ಲ ಕೃತಿಗಳು ( ಕನ್ನಡ, ಇಂಗ್ಲಿಷ್, ಸಂಸ್ಕೃತ)
 5. ರಾಮಾನುಜಾಚಾರ್ಯರ ಸಿದ್ಧಾಂತ ಕ್ಕೆ ಸಂಬಂಧ ಪಟ್ಟ ಎಲ್ಲ ಕೃತಿಗಳು (ಕನ್ನಡ ಇಂಗ್ಲಿಷ್ ಸಂಸ್ಕೃತ)
 6. ಶಂಕರಾಚಾರ್ಯರ ಸಿದ್ಧಾಂತ ಕ್ಕೆ ಸಂಬಂಧ ಪಟ್ಟ ಎಲ್ಲ ಕೃತಿಗಳು (ಕನ್ನಡ ಇಂಗ್ಲಿಷ್ ಸಂಸ್ಕೃತ)
 7. ಚತುರ್ವೇದಗಳು (ಕನ್ನಡ, ಇಂಗ್ಲಿಷ್, ಸಂಸ್ಕೃತ)
 8. ಉಪನಿಷತ್ತುಗಳು (ಕನ್ನಡ, ಇಂಗ್ಲಿಷ್, ಸಂಸ್ಕೃತ)
 9. ರಾಮಾಯಣ (ಕನ್ನಡ, ಇಂಗ್ಲಿಷ್, ಸಂಸ್ಕೃತ)
 10. ಮಹಾಭಾರತ (ಕನ್ನಡ, ಇಂಗ್ಲಿಷ್, ಸಂಸ್ಕೃತ)
 11. ಶ್ರೀಮದ್ ಭಗವದ್ಗೀತೆ (ಕನ್ನಡ, ಇಂಗ್ಲಿಷ್, ಸಂಸ್ಕೃತ)
 12. ಹದಿನೆಂಟು ಪುರಾಣಗಳು (ಕನ್ನಡ, ಇಂಗ್ಲಿಷ್, ಸಂಸ್ಕೃತ)
 13. ಯೋಗವಾಸಿಷ್ಠ
 14. ಪತಂಜಲಿಯ ಯೋಗ ಸೂತ್ರ (ಕನ್ನಡ, ಇಂಗ್ಲಿಷ್, ಸಂಸ್ಕೃತ)
 15. ಅಭಿನವ ಗುಪ್ತರ ಲಭ್ಯವಿರುವ ಎಲ್ಲ ಕೃತಿಗಳು. (ಕನ್ನಡ, ಇಂಗ್ಲಿಷ್, ಸಂಸ್ಕೃತ)
 16. ಸಮಗ್ರ ವಚನ ಸಂಪುಟ
 17. ಸಮಗ್ರ ದಾಸ ಸಾಹಿತ್ಯ
 18. ಅರವಿಂದರು , ರಮಣರು, ರಾಮಕೃಷ್ಣ ಪರಮಹಂಸರು,  ವಿವೇಕಾನಂದರು ಇವರೆಲ್ಲರ ಜೀವನ ಚರಿತ್ರೆ ಮತ್ತು ಅವರು ರಚಿಸಿದ ಕೃತಿಗಳು (ಕನ್ನಡ, ಇಂಗ್ಲಿಷ್)
 19. ಶ್ರೀ ರಾಘವೇಂದ್ರ ಸ್ವಾಮಿ ಗಳ ಜೀವನ ಚರಿತ್ರೆ ಮತ್ತು ಅವರು ರಚಿಸಿರುವ ಕೃತಿಗಳು
 20. ರಜನೀಶ್,  ಜಿಡ್ಡು ಕೃಷ್ಣಮೂರ್ತಿ,  ಯು ಜಿ ಕೃಷ್ಣಮೂರ್ತಿ ಇವರ ಲಭ್ಯವಿರುವ ಎಲ್ಲ ಕೃತಿಗಳು.
 21. ಶ್ರೀ ಚೈತನ್ಯ ಮಹಾಪ್ರಭು ಮತ್ತು ಪ್ರಭುಪಾದರ ಕೃತಿಗಳು
 22. ಅರವಿಂದರು ಮೊದಲಾದ ದಾರ್ಶನಿಕರು ರಚಿಸಿದ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳು
 23. ಶ್ರೀ ರಾಘವೇಂದ್ರ ಸ್ವಾಮಿಗಳ ಸಂಸ್ಕೃತ ಕನ್ನಡ ಇಂಗ್ಲಿಷ್ ಕೃತಿಗಳು.
 24. ಗಾಂಧೀಜಿಯವರ ಆತ್ಮ ಚರಿತ್ರೆ ಮತ್ತು ಅವರ ಕುರಿತ ಕೆಲವು ಗ್ರಂಥಗಳು
 25. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಮತ್ತು ಸಮಗ್ರ ಕೃತಿಗಳು
 26. ಬೇಂದ್ರೆಯವರ ಸಮಗ್ರ ಕೃತಿಗಳು
 27. ಪುತಿನ ಅವರ ಸಮಗ್ರ ಕೃತಿಗಳು
 28. ಕೆ ಎಸ್ ನಾರಾಯಣ ಆಚಾರ್ಯರ ಸಮಗ್ರ ಕೃತಿಗಳು
 29. ದೇವುಡು ನರಸಿಂಹ ಶಾಸ್ತ್ರಿಗಳ ಕೃತಿಗಳು
 30. ಎಲ್ಲ ಭಾಷೆಯ ನಿಘಂಟುಗಳು (ಕನ್ನಡ, ಇಂಗ್ಲಿಷ್, ಸಂಸ್ಕೃತ)