Bannanje Govindacharya – Uvaacha

ಶ್ರೀ ಬನ್ನಂಜೆ ಗೋವಿಂದಾಚಾರ್ಯ ಉವಾಚ

ನನ್ನ ಪುಸ್ತಕ ವಿಮರ್ಶೆ 

ಒಮ್ಮೆ ಒಂದು ಧಾರ್ಮಿಕ ಪುಸ್ತಕ ವಿಮರ್ಶೆಗೆ ಬಂತು. ನಾನು ಅದನ್ನು ಕಟುವಾಗಿ ಟೀಕಿಸಿದೆ. ಆರು ತಿಂಗಳ ತನಕ ಲೇಖಕರು ಮೌನವಾಗಿದ್ದರು. ಆಮೇಲೆ ಒಂದು ಪತ್ರ ಬಂತು. ‘ ಬನ್ನಂಜೆ, ನೀವು ವಿಮರ್ಶೆ ಬರೆದ ಮೇಲೆ ನನ್ನ ಒಂದು ಪುಸ್ತಕವೂ ಮಾರಾಟವಾಗಿಲ್ಲ. ನಿಮಗೆ ಸಂತೋಷವಾಗಲಿ.

ಮತ್ತೊಬ್ಬರು ಚೂರಿ ಹಿಡಿದು ಬಂದು ಅಂದರು – ‘ ಬನ್ನಂಜೆ ನೀವು ಹೀಗೆ ನನ್ನ ಕೃತಿಗಳನ್ನು ಟೀಕಿಸುವಿದಕ್ಕಿಂತ ನನ್ನ ಹೊಟ್ಟೆಗೆ ಚೂರಿ ಹಾಕಿಎಂದರು.”

 

ಬದುಕು 

ಬದುಕುವುದು ಎಂದರೇನು? ಕೆಲವರು ಬದುಕುತ್ತಾರೆ. ಅವರಿಗೆ ಬದುಕೇ ಇರುವುದಿಲ್ಲ. ಅವರು ಉಸಿರಾಡುತ್ತಾರೆ. ಆದರೆ ಬದುಕುವುದಿಲ್ಲ. ಮರಗಳೂ ಬದುಕುತ್ತವೆ. ಅವುಗಳದು ಎಂಥ ಬದುಕು

ತರವಃ ಕಿಂ ಜೀವಂತಿ?’ ಎಂದು ಕೇಳುತ್ತಾರೆ ಶಾಸ್ತ್ರಕಾರರು. ಒಂದು ದೃಷ್ಟಿಯಲ್ಲಿ ಮರಗಳ ಬದುಕಾದರೂ ಬೇಕು. ಅವುಗಳು ನೆರಳು ನೀಡುತ್ತವೆ. ಕಡಿಯ ಬಂದವನಿಗೆ ಕೂಡ. ಹೂ ಹಣ್ಣು ನೀಡುತ್ತವೆ. ಸಾವಿರಾರು ಹಕ್ಕಿಗಳಿಗೆ ಆಸರೆ ನೀಡುತ್ತವೆ. ನಿದ್ರೆಯಂತೆಯೆ ಮಮಕಾರವಿರದ ಸ್ಥಿತಿಯನ್ನು ತಲಪಬೇಕು. ಅದು ಬದುಕು.”

ಗುರುಕಾರುಣ್ಯ 

ನಾನು ಬೆನ್ನು ನೋವಿನಿಂದ ತಿಂಗಳು ತಿಂಗಳು ಹಾಸಿಗೆ ಹಿಡಿದಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಮನೆಯ ಮುಂದೆ ಗಾಡಿ ನಿಂತಿತು. ಗಾಡಿಯಿಂದ ಅಕ್ಕಿ, ಬೇಳೆ, ಖಾರದಪುಡಿಯ ಸಹಿತ ಮನೆಗೆ ಬಂತು. ‘ ಯಾರು ಕಳಿಸಿದ್ದು?’ ಎಂದೆ. ‘ ಪಲಿಮಾರು ಸ್ವಾಮಿಗಳುಎಂದರು. ಕಣ್ಣಲ್ಲಿ ನೀರು ಬಂತು. ನಾನು ಹೇಗೆ ಇವರಿಗೆ ಪ್ರತ್ಯುಪಕರಿಸಲಿ.’

ಕೈಗೂಡಿದ ಆಸೆ

ನನಗೆ ಹದಿನಾರು ವರ್ಷ,ಆಗ ನನಗೆ ಬಲವಾದ ನಾಲ್ಕು ಆಸೆಗಳಿದ್ದವು. . ಋಗ್ವೇದದ ೧೦, ಮಂತ್ರಗಳಿಗೆ ಅರ್ಥ ಬರೆಯಬೇಕು. . ಭಾಗವತಕ್ಕೆ ಒಂದು ವ್ಯಾಖ್ಯಾನ ಬರೆಯಬೇಕು. . ಸರ್ವಮೂಲಗ್ರಂಥವನ್ನು ಹೃಷಿಕೇಶತೀರ್ಥರ ಬರಹದಂತೆ ಸಂಶೋಧಿಸಬೇಕು. . ಸಂಸ್ಕೃತ ಸಿನೆಮಾ ತೆಗೆಯಬೇಕು. ಇದರಲ್ಲಿ ಕೊನೆಯ ಎರಡು ಆಸೆಗಳನ್ನು ಭಗವಂತ ಆಗಗೊಡಿಸಿದ ಇನ್ನೆರಡನ್ನು ನಡೆಸಿಕೊಡಬೇಕು.”

 

ಬೇಂದ್ರೆಯ ಸ್ನೇಹ 

ಧಾರವಾಡದ ಒಂದು ಸಭೆಯಲ್ಲಿ ಬೇಂದ್ರೆ ಅಂದಿದ್ದರು – “ನೀವು ಯಾವುದೇ ಕಾರ್ಯಕ್ರಮಕ್ಕೆ ಬನ್ನಂಜೆಯನ್ನುಕರೆದರೂ ಸಾಯಂಕಾಲ ಐದು ಗಂಟೆಯ ಮೇಲೆ ಅವರು ನಿಮಗೆ, ಅದುವರೆಗೆ ಅವರು ನನಗೆ ಬೇಕು“.

 

ಉದಯವಾಣಿ ಮತ್ತು ನಾನು

 ” ನನಗೆ Academical Qualification ಇಲ್ಲ. ಅಂಥಹಾ ಅರ್ಹತೆ ಇರುವವರು ಹತ್ತಾರು ಮಂದಿ ಕಾಯುತಿದ್ದರು. ಆದರೂ ಬೇಡವೆಂದರೂ ನನ್ನನ್ನು ಪತ್ರಿಕಾರಂಗಕ್ಕೆ ಒಗ್ಗಿಸಿದವರು ಉದಯವಾಣಿ ಬಳಗ. ನನಗೆ ಇಷ್ಟ ಬಂದಾಗ ಬರುವಂತೆ ಅನುಮತಿಸಿ. ಸಂಕೋಚವಾಗಬಾರದೆಂದು ಹಾಜರಾತಿ ಪುಸ್ತಕದಲ್ಲಿ ನನ್ನ ಹೆಸರನ್ನು ನಮೂದಿಸಿಲ್ಲ. ಬಂದರೆ ಬಂದೆ, ಇಲ್ಲವಾದರೆ ಇಲ್ಲ. ಆದರೆ ಸಂಬಳಕ್ಕೆ ಚ್ಯುತಿಯಿಲ್ಲ.ಬೆನ್ನು ನೋವಿನಿಂದ ತಿಂಗಳುಗಟ್ಟಲೆ ಗೈರುಹಾಜರಾದರೂ ತಿಂಗಳ ಸಂಬಳ ಖಾತೆಗೆ ಜಮಾ. ನಾನು ಹೇಗೆ ಮರೆಯಲಿ ಇವರನ್ನು.”  

ಹೆಣ್ಣು ಮತ್ತು ವೇದಾಂತ 

ಹೆಣ್ಣಿನ ಮೈಯಲ್ಲಿ ವೇದಾಂತದ ಸುಳಿವಿದೆ. ವೇದಾಂತದ ಪುಟಗಳಲ್ಲಿ ಹೆಣ್ಣಿನ ಚಲುವಿದೆ. ಇರಬೇಕಾದ್ದು ಕಾಣುವ ಕಣ್ಣು ಮಾತ್ರ. ಹೆಣ್ಣು ಇಲ್ಲದ ತತ್ವಜ್ಞಾನ ಅಪೂರ್ಣ. ತತ್ವಜ್ಞಾನ  ಒಲ್ಲದ ಹೆಣ್ಣೂ ಅಪೂರ್ಣ. ಇದು ಭರತೇಶ ವೈಭವ: ” ಪೂರ್ಣಮದಃ ಪೂರ್ಣಮಿದಂ“. ಇದು ಕಾವ್ಯದ ಮಾರ್ಗ. ಮುತ್ತು ಹೆಕ್ಕುವ ಸಾಹಸದ ರತ್ನಾಕರ ಮಾರ್ಗ. ಕಾವ್ಯದ ಅಭಿಚಾರಕ್ಕೊಂದು ಅಪಾಮಾರ್ಗ.