
- ಸಂಸ್ಕೃತ ಭಾಷಾ ಶಿಬಿರ
- ವೇದ ಪಠನ ತರಬೇತಿ ಶಿಬಿರ
- ಬನ್ನಂಜೆ ಓದು : ಅವರ ಸಂಸ್ಕೃತ ಗ್ರಂಥಗಳ ಕುರಿತು ಕಾರ್ಯಾಗಾರ
- ಬನ್ನಂಜೆ ಓದು : ಅವರ ಕನ್ನಡ ಕೃತಿಗಳ ಕುರಿತು ಕಾರ್ಯಾಗಾರ
- ಬನ್ನಂಜೆ ಪ್ರವಚನ : ಅವರ ಒಂದು ನಿರ್ದಿಷ್ಟ ವಿಷಯದ ಪ್ರವಚನವನ್ನು ಕೇಳುವ ಮತ್ತು ಆ ಕುರಿತು ಜಿಜ್ಞಾಸೆಯನ್ನು ಉಳ್ಳ ಕಾರ್ಯಾಗಾರ
ವರ್ಷದಲ್ಲಿ ಎರಡು ಬಾರಿ ವಿಶೇಷ ಸಾಧಕರು ಅಥವಾ ಅವಧೂತರ ಜೊತೆ ಬೃಹದಾರಣ್ಯಕದಲ್ಲಿ ಸತ್ಸಂಗವನ್ನು ಕೂಡ ನಮ್ಮ ಪ್ರತಿಷ್ಠಾನ ಏರ್ಪಡಿಸುತ್ತದೆ.
ಮತ್ತು ಕನಕ ಜಯಂತಿ ಯ ದಿನ ಪ್ರತಿಷ್ಠಾನ ಕನಕೋಪನಿಷತ್ ಎಂಬ ಅಪ್ಪನ ಕೃತಿಯ ಹೆಸರಿನಲ್ಲಿ ಕನಕದಾಸರ ಕುರಿತು ಕಾರ್ಯಕ್ರಮ ನಡೆಸುತ್ತದೆ
ಇದಲ್ಲದೇ ಅವರಿಗೆ ಪ್ರಿಯವಾದ ಸಂಗೀತ, ನಾಟ್ಯ, ಚಿತ್ರಕಲೆ, ನಾಟಕ,ಯಕ್ಷಗಾನ ಮುಂತಾದವುಗಳ ಪ್ರದರ್ಶನ.
ಆದಷ್ಟು ಅವರದೇ ರಚನೆಯ ನಾಟಕಗಳ ರಂಗಪ್ರದರ್ಶನ.
ಇವಿಷ್ಟು ಅಲ್ಲದೇ ಬನ್ನಂಜೆ ಗೋವಿಂದಾಚಾರ್ಯರ ಅಧ್ಯಯನಕ್ಕೆ ಬೇಕಾದ ಕೃತಿಗಳನ್ನು ಮತ್ತು ಅವರ ಪ್ರವಚನಗಳನ್ನು ಕೇಳಲು ಬೇಕಾಗುವ ಪುಸ್ತಕ ಮತ್ತು ಆಡಿಯೊ ವಿಡಿಯೋಗಳ ವ್ಯವಸ್ಥೆಯನ್ನು ಮಾಡಿಕೊಡುವುದು. ಅಧ್ಯಯನ ಆಕಾಂಕ್ಷಿಗಳಿಗೆ ಪೂರಕ ಮಾಹಿತಿ ಮತ್ತು ಮಾರ್ಗದರ್ಶನಗಳನ್ನು ಒದಗಿಸುವುದು.
Address – Aaranyaka Ashram
80/4, Aaranyaka Kunigal Road, Mahadevapura, Karnataka 562123
094835 39688