Scholars’ quotes about Sri Bannanje Govindacharya

ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಗಣ್ಯರು ಹಾಗು ವಿದ್ವಾಂಸರ ಉಲ್ಲೇಖಗಳು

ಸತ್ಯಕಾಮರು

ಆಚಾರ್ಯರು ಮಾತಿಗೆ ತೊಡಗಿದರೆ ಸರಸ್ವತಿ ತನ್ನ ವೀಣೆಯನ್ನು ಚೀಲದೊಳಗೆ ಸೇರಿಸುತ್ತಿದ್ದಳು

ಆಚಾರ್ಯರ ಮಾತು ಗೋವಿಂದೋಪನಿಷತ್ತು ಅದು ಇದುವರೆಗಿನ ಉಪನಿಷತ್ತಿಗಿಂತ ಹೊಸದು

ಲಕ್ಷ್ಮೀಶ ತೋಳ್ಪಾಡಿ

ಸ್ವಾಧ್ಯಾಯ ಎನ್ನುವ ಪದವು internalise ಆಗುವಂತೆ ಕಲಿಯುವುದೇ ನಿಜವಾದ ಅಧ್ಯಯನ ಎನ್ನುವ ಅರ್ಥವನ್ನು ಸೂಚಿಸುತ್ತದೆ.  ಅರ್ಥದಲ್ಲಿ ಬನ್ನಂಜೆ ‘ಸ್ವಯಮಾಚಾರ್ಯ ಪುರುಷ

ಆರ್ಗಣೇಶ್

ಆಚಾರ್ಯರ ಸಾಹಿತ್ಯ ಸಾಧನೆ ಹಿಂಡನಗಲಿದ ಸಲಗನಂತೆ ತಾನೇ ಹೆದ್ದಾರಿಯಾಗಿ ಸಾಗಿದೆ

ಶ್ರೀ ವಿಶ್ವೇಶತೀರ್ಥರು

 “ಬನ್ನಂಜೆಯವರು ಹಗಲೂ ರಾತ್ರಿ ಶಾಸ್ತ್ರ ಸಮುದ್ರವನ್ನು ಮಥನ ಮಾಡಿಬುದ್ಧಿಯೆಂಬ ಮಂದರ ಪರ್ವತವನ್ನು ಕಡೆಗೋಲು ಮಾಡಿಶಾಸ್ತ್ರ ಮಥನದಲ್ಲಿ ಬಂದ ಭ್ರಾಂತಿ ಎಂಬ ವಿಷವನ್ನು ಮಹದೇವನಂತೆ ತಾನೇ ಕುಡಿದು, ಜನರಿಗೆ ತತ್ವಜ್ಞಾನದ ಅಮೃತವನ್ನು ನೀಡಿದ್ದಾರೆ. ಎಷ್ಟೋ ಮಂದಿ ಎಷ್ಟೋ ವರುಷದ ವರೆಗೆ ಮಾಡಿದರೂ ಮುಗಿಯದಷ್ಟು ಸಂಶೋಧನೆಯನ್ನು ಅವರು ಒಬ್ಬರೇ ಮಾಡಿದ್ದಾರೆ.

ದಕ್ಷಿಣ ಕನ್ನಡಕ್ಕೆ ಬಂದವರೆಲ್ಲ ನೋಡಬೇಕಾದದ್ದು ಒಂದು ಸಹ್ಯಾದ್ರಿ ಬೆಟ್ಟ ಮತ್ತೊಂದು ಸಮುದ್ರಆದರೆ ಸಮುದ್ರದ ಆಳ ಪಶ್ಚಿಮ ಘಟ್ಟದ ಎತ್ತರ ಎರಡನ್ನೂ ನೋಡಬೇಕಾದರೆ ಅವರು ಬನ್ನಂಜೆ ಗೋವಿಂದಾಚಾರ್ಯರನ್ನು ನೋಡಬೇಕು.

ನಿಜವಾಗಿ ಜ್ಞಾನಪೀಠ ಪ್ರಶಸ್ತಿ ಬನ್ನಂಜೆಯವರಿಗೆ ಸಲ್ಲಬೇಕುಅಷ್ಟು ಅಪಾರ ಸೇವೆ ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ್ದಾರೆ

ಶ್ರೀ ಶ್ರೀ ಯತಿರಾಜ ಜೀಯರ್

ಬನ್ನಂಜೆಯವರು ಸ್ವತಃ ಒಂದು ಜ್ಞಾನಪೀಠನಾವೆಲ್ಲ ಒಂದೊಂದು ಮಠದ ಪೀಠಾಧಿಪತಿಗಳಾದರೆ ಬನ್ನಂಜೆಯವರು ಜ್ಞಾನದ ಪೀಠಾಧಿಪತಿಗಳು

ಎಚ್. ವಿ. ನಾಗರಾಜ ರಾವ್

ಆಚಾರ್ಯರು ಸತ್ತಿಲ್ಲ ಅವರು ಈಗ ದೇವಲೋಕದಲ್ಲಿ ಇದ್ದರೆ ಬೃಹಸ್ಪತಿಗಳ ಜೊತೆಗೆ, ವೈಕುಂಠದಲ್ಲಿ ಇದ್ದರೆ ನಾರದರ ಜೊತೆಗೆ, ಬ್ರಹ್ಮಲೋಕದಲ್ಲಿ ಇದ್ದರೆ ಸರಸ್ವತಿ ಜೊತೆಗೆ ಚರ್ಚಿಸುತ್ತಿರುತ್ತಾರೆ. “