BANNANJE GOVINDACHARYA PRATISHTANA-TRUSTEES

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಪರಿಚಯ, ಅದರ ಕೆಲಸ ಕಾರ್ಯಗಳು ಮತ್ತು ಅದರ ಆರ್ಥಿಕ ವ್ಯವಸ್ಥೆಯ ವಿವರಗಳು

ಇದು ವಾಸ್ತವಿಕ ಐದು ಜನರ ಒಂದು ಟ್ರಸ್ಟ್.

2015 ರಲ್ಲಿ ಇದನ್ನು ಬನ್ನಂಜೆ ಎಂಬತ್ತರ ಸಂಭ್ರಮದ ಉದ್ದೇಶಕ್ಕಾಗಿ ಸ್ಥಾಪಿಸಲಾಯಿತು. 

 ಕಾರ್ಯಕ್ರಮಕ್ಕೆ ಅಂದಾಜು ಇಪ್ಪತ್ತೆಂಟು ಲಕ್ಷ ಧನಸಂಗ್ರಹ ಮಾಡಿ ಐದು ದಿನಗಳ ವೈಭವದ ಕಾರ್ಯಕ್ರಮ ಮುಗಿಸಿ, ಕೆಲವೇ ಲಕ್ಷ ಹಣ ಉಳಿದಿತ್ತು. ಅದನ್ನು ಅಭಿಮಾನಿಗಳು ಕೊಟ್ಟ ಕಾಣಿಕೆ ಎಂದು ಅಪ್ಪನಿಗೆ ಸಲ್ಲಿಸಲು ಹೋದಾಗ ಪ್ರತೀ ವರ್ಷ ನನ್ನ ಹೆಸರಿನಲ್ಲಿ ಒಬ್ಬ ಸಂಸ್ಕೃತ ವಿದ್ವಾಂಸರಿಗೆ ಸನ್ಮಾನ ಮಾಡಿ, ಗೌರವ ಧನ ಕೊಡಿ ಎನ್ನುವಲ್ಲಿಂದ ವರ್ಷವೂ ಕಾರ್ಯಕ್ರಮ ಮಾಡುವ ಹೊಸ ಜವಾಬ್ದಾರಿ ಆರಂಭವಾಯಿತು. ಅಂದಿನಿಂದ ಪ್ರತಿಷ್ಠಾನ ವರ್ಷಕ್ಕೆ ಎರಡು ಕಾರ್ಯಕ್ರಮ ಮಾಡುತ್ತಾ ಬಂದಿದೆ. 

ಒಬ್ಬ ವಿದ್ವಾಂಸರ ಸನ್ಮಾನ ಒಂದು ಕಾರ್ಯಕ್ರಮದ ಆಕರ್ಷಣೆ ಆದರೆ, ಒಬ್ಬ ವಿಶೇಷ ವಿದ್ವಾಂಸರು, ಅವಧೂತರು,ಅಥವಾ ಸಾಧಕರನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಇದು ಇನ್ನೊಂದು ಕಾರ್ಯಕ್ರಮದ ಮುಖ್ಯ ಕೇಂದ್ರ. ಎರಡೂ ಕಾರ್ಯಕ್ರಮ ಅಪ್ಪನ ಉಪಸ್ಥಿತಿಯಲ್ಲಿ ನಡೆಯುತ್ತಿತ್ತು.

ವೀಣಾ ಬನ್ನಂಜೆ ಇದರ ಪ್ರಧಾನ ಟ್ರಸ್ಟಿ

 ನಾಲ್ವರು ಪ್ರಸ್ತುತ ಟ್ರಸ್ಟಿಗಳು

ಮಲ್ಲೇಪುರಂ ಜಿ ವೆಂಕಟೇಶ್

ಬದರಿನಾಥ್ ಎಸ್

ಯದುನಾಥ ಎಸ್ ಜಿ 

ಕವಿತಾ ಉಡುಪ 

ಕಾರ್ಯಕ್ರಮಗಳಿಗೆ ಅನುಗುಣವಾಗಿ ಹೊಸ ಹೊಸ ಸಮಿತಿಯನ್ನು  ಮೇಲಿನ ಐವರು ರಚಿಸುತ್ತಾರೆ. ಹಾಗೆ ಕೆಲಸಗಳನ್ನು ದಾನ, ದೇಣಿಗೆ ಮತ್ತು ವಂತಿಗೆಯ ಹಣದ ಮೂಲಕ ನಡೆಸಲಾಗುವುದು.

 ಸಂಸ್ಥೆ ಆರಂಭ ಆಗಿ ಆರು ವರ್ಷಗಳು ಆದುವು. ಅಪ್ಪನ ಹುಟ್ಟಿದ ದಿನ ಮತ್ತು ಇನ್ನೊಂದು ಕಾರ್ಯಕ್ರಮವನ್ನು ಅಂದಿನಿಂದ ಅಪ್ಪನ ಉಪಸ್ಥಿತಿಯಲ್ಲಿ ನಡೆಸಿಕೊಂಡು ಬಂದಿದ್ದೇವೆ. ಅವರು ಇದ್ದಾಗಲೇ ವರ್ಷಕ್ಕೆ ಒಬ್ಬ ಸಂಸ್ಕೃತ ವಿದ್ವಾಂಸರನ್ನು ರೂ 25 ಸಾವಿರ ಮೊತ್ತದೊಂದಿಗೆ ಬನ್ನಂಜೆ ಪುರಸ್ಕಾರ ಎಂಬ ಪ್ರಶಸ್ತಿ ಕೊಟ್ಟು ಸನ್ಮಾನಿಸುತ್ತಿದ್ದೆವು

ಈಗಾಗಲೇ ಈ ಕೆಳಗೆ ಉಲ್ಲೇಖಿಸಿರುವ ಮೊದಲ ಮೂವರನ್ನು ಗೌರವಿಸಿದ್ದೇವೆ. ಇನ್ನು ಇಬ್ಬರನ್ನು ಈ ವರುಷದಲ್ಲಿ ಗೌರವಿಸುತ್ತೇವೆ.

  1. ಶ್ರೀ ಶಂಕರ – 2017 
  2. ಶ್ರೀ ಉಮಾಕಾಂತ ಭಟ್ – 2018
  3. ಶ್ರೀ ಹೆಚ್ ಆರ್ ವಿಶ್ವಾಸ್ – 2019
  4. ಶ್ರೀ ಹೆಚ್ ವಿ ನಾಗರಾಜ್ ರಾವ್ -2020
  5. ಶ್ರೀ ಶ್ರೀನಿವಾಸ ವರಖೇಡಿ – 2021

ಪ್ರಶಸ್ತಿ ಆಯ್ಕೆ ಸಮಿತಿ: ಶ್ರೀ ಮಲ್ಲೇಪುರಂ ಜಿ ವೆಂಕಟೇಶ್, ಶ್ರೀ ಹೆಚ್ ವಿ ನಾಗರಾಜ್ ರಾವ್, ಶ್ರೀ ಉಮಾಕಾಂತ ಭಟ್

ಹಾಗೆಯೇ ಅಪ್ಪ ಉಪಸ್ಥಿತರಿದ್ದ ಪ್ರತಿಷ್ಠಾನದ ಎರಡು ಸಭೆಗಳಲ್ಲಿ  ಬನ್ನಂಜೆ ಅಧ್ಯಯನ  ಕೇಂದ್ರ ಸ್ಥಾಪಿಸುವುದಾಗಿ ಪ್ರಸ್ತಾವಿಸಿದ್ದೆವು. ಅಪ್ಪ ಅದಕ್ಕೆ ಅನುಮತಿಸಿದ್ದರು. ದೂರ ಎಲ್ಲಾದರೂ ಆರಣ್ಯಕದಂಥಲ್ಲಿ ಮಾಡಿ ಎಂದಿದ್ದರು. ಅದೀಗ ಸುರೇಶ್ ಅವರ ಪ್ರೋತ್ಸಾಹದಿಂದ ಆರಣ್ಯಕದಲ್ಲಿಯೇ ಬೃಹದಾರಣ್ಯಕ ಎಂಬ ಹೆಸರಲ್ಲಿ ಪ್ರಾರಂಭಗೊಂಡಿದೆ. 3.8.21 ರಂದು ಅಪ್ಪನ ಹುಟ್ಟಿದ ದಿನ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.